Posted by: nag4nagu on: June 22, 2007
To,
Pr…
#143, ನನ್ನ ಹೃದಯದೂರು..
ನಾ ಬಚ್ಚಿ. ಮುಚ್ಚಿಡೋ ಪತ್ರ(…ಪ್ರೇಮಪತ್ರ!!)ಗಳ ಸಾಲಿಗೆ ಮತ್ತೊಂದು, sorry ಕಣೇ ಇದುವರೆಗೂ ನಾ ಬರೆದ ಪತ್ರಗಳನ್ನ ನಿನಗೆ ಕೊಡದಿದ್ದಕ್ಕೆ, ನೀ ಅದನ್ನ ಓದದ್ದಕ್ಕೆ!! ಅಷ್ಟಕ್ಕೂ ನಾನು ನೀ ಓದಲಿ ಅಂಥ ಬರೆದಿಲ್ಲ, ಬರೀತಾ ಇಲ್ಲ.. ನಾ ಬರೆಯೋ ಪತ್ರಗಳು, ಅದರೊಳಗಿನ ಸಾಲುಗಳು ನಿನಗೋಸ್ಕರ ಮಾತ್ರ ಬರೆದಿದ್ದಲ್ಲ…ಅವು ನನಗೋಸ್ಕರ, ನನ್ನೊಳಗಿನ ನಿನಗೋಸ್ಕರ ಮತ್ತೊಮ್ಮೆ ಹೇಳ್ತಾ ಇದಿನಿ ಕೇಳು…ನನ್ನೊಳಗಿನ ನಿನಗೋಸ್ಕರ..!!, ನಾ ನಿನ್ನ ನೆನಪಲಿ ಕಳೆದ sorry “ಬದುಕಿದ” ಕ್ಷಣಗಳಿಗೋಸ್ಕರ.. ನಿನ್ನ ನೆನಪಲಿ ತೇಲೋದಕ್ಕೆ ಸಾಥ್ ಕೊಟ್ಟ ಆ ಗಾಳಿಗೋಸ್ಕರ, ನಾ ಏಕಾಂತದಲಿ ಗುನುಗಿದ ಹಾಡುಗಳಿಗೋಸ್ಕರ..ನೋವಿದ್ದ ಸಾಲುಗಳಿಗೋಸ್ಕರ..
ಇರಲಿ ಬಿಡು…ಮತ್ತೆ ಉತ್ತರ ಬಾರದ ನಿನ್ನೆಡೆಗೆ ಮತ್ತೊಂದು ಪ್ರಶ್ನೆ..! ಈ ಜಗತ್ತಲ್ಲಿ.. ನಾವು ಅಂದ್ರೆ ಮನುಷ್ಯರು ಪ್ರೀತಿ ಯಾಕ್ ಮಾಡ್ತೀವಿ, ಅಥವಾ ಪ್ರೀತಿಯ ಬಲೆಗೆ ಯಾಕ್ ಬೀಳ್ತೀವಿ ಗೊತ್ತಾ..? sorry ನಿನಗದು ಗೊತ್ತಿರಲಿಕ್ಕಿಲ್ಲ ಬಿಡು.. ನನ್ನ ಪ್ರಕಾರ..ಕೆಲವರು ತಾವು ಬದುಕಿಷ್ಟು ದಿಸ ಸಿಕ್ಕದ ಸಂತೋಷಕ್ಕೋಸ್ಕರ, ತಾವು ಪಡೋ ಸಂತೋಷಕ್ಕೆ ಒಂದು ಹೆಸರಿಡೋಗೋಸ್ಕರ…ಇನ್ನು ಕೆಲವರು ತಮ್ಮಲ್ಲಿರೋ ಸಂತೋಷವನ್ನ ಅಂಚಿಕೊಂಡು ಬದುಕಕ್ಕೆ.. ಕೆಲವರು ನಮ್ UPPI ಹೇಳೋ ಹಾಗೆ ಕ್ಷಣಿಕ ಸುಖಕ್ಕಾಗಿ.. ಪಾಪ ಇನ್ನು ಕೆಲವರು ಗೊತ್ತಿಲ್ಲದೇ ತಪ್ಪು ಮಾಡ್‍ಬಿಡ್ತಾರೆ…!!
ಆದ್ರೆ ನಾನ್ ಇವುಗಳಲ್ಲಾವುದರ ಗುಂಪಿಗೂ ಸೇರದವನು… ನಾನು ನೋವಿಗಾಗಿ ಪ್ರೀತಿಸಿದವನು.. ಪ್ರೀತಿಸುತ್ತಿರುವವನು!! ಅಂಥವರೊದೊಂದು ಗುಂಪು ಅನ್ನೋದ್ ಇದ್ರೆ..ಅವ್ರಲ್ಲಿ ನಾನೂ ಒಬ್ಬ!! ಅವರು ಕೈಗೆ ಸಿಗದ ಚಂದಮಾಮನ ನೋಡಿ ತಾಯಿ ನೀಡೋ ತುತ್ತು ತಿನ್ನೋ ಮುಗುದ ಮಕ್ಕಳ ಹಾಗೆ.. ಗಾವುದ ದೂರದಲ್ಲಿ ಮೂಡಿದ ಬಣ್ಣದಬಿಲ್ಲಿನ ಮೋಡಿಗೆ ಗರಿಗೆದರಿದ ನವಿಲಿನ ಹಾಗೆ!!
ಅವರಿಗೆ ಗೊತ್ತಿದ್ದೋ, ಗೊತ್ತಿಲ್ದೇನೋ ತಮಗೆ ಒಲಿಯದ, ನಲಿಯದ ಪ್ರಿತಿಗಾಗಿ ಅರೆಕ್ಷಣವಾದ್ರು ತುಡಿಯುತ್ತಿರುತ್ತಾರೆ, ಮಿಗಿಲಾಗಿ “ಪ್ರೀತಿಸದ” ಹೃದಯವನ್ನ ಪ್ರೀತಿಸುತ್ತಿರುತ್ತಾರೆ!! ಇವರನ್ನ “ಹುಚ್ಚರು” ಅನ್ನೋ ಮುದ್ದಾದ label ಹಾಕಿ ನಗುತ್ತದೆ ಈ ಲೋಕ!!
pr…ನಾ ಅಂಥವರಲ್ಲಿ ಒಬ್ಬ.!!ನನಗೊತ್ತು ನೀ ಪ್ರೀತಿಸೋಲ್ಲ.. ಪ್ರೀತಿಸಿದರು ನನ್ನ.. ಉಹೂಂ ಪ್ರೀತಿಸೋದೇ ಇಲ್ಲ, ಆದ್ರೂ ನಾ ನಿನ್ನ ಪ್ರೀತಿಸ್ತಿನಿ.. ಯಾಕಂದ್ರೆ ನಾನು ಬದುಕಬೇಕು! ಪ್ರೀತಿ ಇಲ್ಲ ಅಂದ್ರೆ ಬದುಕಲಾಗುತ್ತ…? ಬದುಕಿದರೂ ಅದು ಒಂದು ಬಾಳಾ… ಬದುಕಾ…? ಹೇಳ್ತಿನಿ ಕೇಳು.. ಕೆಲವೊಂದು ಸಲ ಅನ್ಸುತ್ತೆ ಈ ಜಗತ್ತಲಿ…ನನ್ನೊಷ್ಟು ಖುಷಿಯಿಂದ ಯಾರೂ ಬದುಕ್ತಾ ಇಲ್ಲ ಅಂಥ… ಆದ್ರೂ ನಾನು ಪ್ರೀತಿಸ್ತಾ ಇದಿನಿ.. ನೋವಿಗಾಗಿ..ನೋವೊಳಗಣ ’ನಲಿವಿಗಾಗಿ’ ; Being haPPy always is a kiNd of BoriNg…. thatz why am iN luv..with u!!
” ಪ್ರೀತಿಯಿಂದ ಸಂತೋಷ ಬಯಸೋರು ಬೇಜಾನ್ ಜನ… ಆದ್ರೆ ಅದು ಸಿಗೋದ್ ಕಡಿಮೆ ಮಂದಿಗೆ…
ಪ್ರೀತಿಯಿಂದ ನೋವು ಬಯಸೋರು.. ತುಂಬಾನೇ ಕಮ್ಮಿ… ಆದ್ರೆ ಅದು ಬೇಜಾನ್ ಜನಕ್ಕೆ ಸಿಗುತ್ತೇ…” ವಿಪರ್ಯಾಸ ಅಂತಾರಲ್ಲ.. ಇದೇ ಇರಬೇಕು…!!
ನಿನ್ನನ್ನ ತುಂಬಾ ಪ್ರೀತ್ಸೋರು ನಿನ್ನ..ತಂದೆ..ತಾಯಿ ಅಕ್ಕ..ಅಣ್ಣಾ.ತಾಂಗಿ..ಇನ್ನು ಎಷ್ಟೋ ಮಂದಿ ಇದಾರಲ್ಲ… ಅವರಿಗಿಂತ ಜಾಸ್ತಿ ನಿನ್ನ ಪ್ರೀತಿ ಮಾಡ್ತೀನಿ ಅಂಥ ನಾ ಹೇಳಲ್ಲ.. ನಿನ್ನ ಪ್ರೀತ್ಸೋರ ಸಾಲಲ್ಲಿ.. Atleast ಲಾಸ್ಟ್ ನಲ್ಲಿ ನಿಂತಿರಿತ್ತೀನಿ..ಕಂಬನಿ ತುಂಬಿದ ಕಣ್ಣುಗಳ ಕಾಣಿಕೆಯೊಂದಿಗೆ… ಮರೆತಾದ್ರೂ, ಗೊತ್ತಿಲ್ಲದೆ ನನ್ನೆ ಕಡೆ ಒಮ್ಮೆ ನೋಟವಲ್ಲದ ನೋಟ…ಎಸೆ.. ನನ್ನ ಕಂಗಳು ಅದಕ್ಕೋಸ್ಕರ ಕಾಯ್ತಾ ಇರ್ತವೆ..ನಾನೂ ಕೂಡ!!
le huDugi ಪ್ರೀತ್ಸೇ..ನನ್ನಲ್ಲದಿದ್ದ್ರೂ.. ಇನ್ಯಾರನ್ನೋ… ಅದು ಬೇಡ atlest ನಿನ್ನನ್ನ…ಪ್ರೀತ್ಸು!! ನಿನ್ನ ಬಾಳೊಂದು ಬರಿಯ ಬಿಳಿ ಮೋಡ ತುಂಬಿದ ಮುಗಿಲಾಗದಿರಲಿ… ಮಳೆ ಸುರಿಸೋ ಕಾರ್ಮೋಡಗಳನ್ನ ಹೊತ್ತ ಮುಗಿಲಾಗಲಿ… (ಪ್ರೀತಿಯ)ಮಳೆಗೆ ಕಾದು ಬೆಂದ ಎಷ್ಟೊ ನೆಲಗಳಿವೆ…ಬರಿದಾದ ಎದೆಗಳಿವೆ.. Ofcorse ಅವರಲ್ಲಿ..ನಾನೂ ಒಬ್ಬ ಇರುತ್ತೀನಿ ಕಣೇ!!! ಕರುಣೆ ಇರಲಿ…
ಈ ಪತ್ರ ಎಲ್ಲೋ, ಹೇಗೋ… ಓದಿ..ನೀ ನಾಲ್ಕು ಹನಿ ಕಣ್ಣ್ರೀರು ಸುರಿಸಿದರೆ(ಮೊಸಳೆ ಕಣ್ಣೀರಾದರೂ…!!) ನಿಜಕ್ಕೂ..ಸಂತೋಷ..ತಪ್ಪು ತಿಳಿಯಬೇಡ , ತಾವು ಪ್ರೀತ್ಸೋರ ಕಣ್ಣಲ್ಲಿ ನೀರು ಬಯಸೋರು ಇರಲ್ಲ..ಆದ್ರೆ ನಾ ಬಯಸ್ತಾ ಇದಿನಿ..ನನ್ನ ಬರಡಾದ ಮನ ಬಯಸ್ತಾ ಇದೆ.. plz..
” ನನ್ನ ಪ್ರೀತಿಗೆ..ಅದರ ರೀತಿಗೆ.. ನೀ ಕೊಡಬಹುದಾದ ಕಾಣಿಕೆ…ನಿನ್ನ ಕಣ್ಣ ಹನಿಗಳೇ…!!”
ನಿನ್ನ ನೋಯಿಸಿದ್ದಕ್ಕೆ ಕ್ಷಮೆ ಇರಲಿ…ನಿನ್ನ ನೆನಪುಗಳು ಮನದ ಕದ ತಟ್ಟಿ ಕಾದು ಕುಳಿತವೆ.. ಅವುಗಳೊಡಾನೆ ಮನದಂಗಳದಲಿ ಕಣ್ಣಾಮುಚ್ಚಾಲೆ..ಆಟ ಆಡ್ಬೇಕು… ರೇಡಿಯೋದಲ್ಲಿ ಬರ್ತಾ ಇರೋ..ಕೆ.ಎಸ್.ನ..ರ…” ನಿನ್ನ ಪ್ರೀತಿಗೆ ಅದರ ರೀತಿಗೆ… ಕಣ್ಣಹನಿಗಳೇ..ಕಾಣಿಕೆ…” ಹಾಡು ಕೇಳ್ಬೇಕು… ಜೊತೆಗೆ ಹಾಡ್ಬೇಕು..ಇನ್ನು ಏನೇನೋ… ಬರಲಾ..
ಅಗೋ ಇನ್ನೊಂದ್ ಹಾಡ್ ಕೇಳ್ತಾ ಇದಿಯಾ… “…ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ, ಈ ತಿರುಗೋ ಭೂಮಿ ತಿರುಗದೆಂದೂ ಒಂದೂ ಕ್ಷಣಾ…!!
…… ಅಟ್ಟದ ಮೇಲೆ ಎತ್ತಿಡೋದಕ್ಕೆ ’ಪ್ರೇಮಪತ್ರ’ ಬರೆದ.. ಕೆಟ್ಟ ಪ್ರೇಮಿ…!!
ಮರೆತೆ.. be haPPy keeP smiliNg…!!
ನಿನ್ನ ನಗುವ ಬಯಸೋ…. ನಾಗು!!
ಹಲೋ ನಾಗು …
ನಿಮ್ಮ ಪ್ರೇಮ ಪತ್ರ ಬಹಳ ಚೆನ್ನಾಗಿದೆ … ಪ್ರೀತಿಯ ಮಾತು ಅದು ನಿಮ್ಮ ಮನಸಿನ ಮಾತು ಸುಂದರ ….
ಶುಭವಾಗಲಿ ನಿಮ್ಮ ಪ್ರೀತಿಗೆ ಎಂದು ಹಾರೈಸುವ ಪ್ರೇಮಿ …ಷನ್ನು
Thank u, Shanmuga avre.. [:)]
Chitra avre, nimgu kooDa thanks.. hELok martiddakke sorr…y!
November 6, 2008 at 9:39 am
ಚೆನ್ನಾಗಿದೇರಿ..ಬರಹ. ನಾನು ಪ್ರೇಮಿ ಅಲ್ಲ..ಆದ್ರೂ ಪ್ರೀತಿಯಿಂದ ಓದಿದೆ.
ಶುಭವಾಗಲಿ,
ಚಿತ್ರಾ