ಕ್ರೂರ ಗೆಳತಿಗೆ…

ನನ್ನ ಮನದ ಗೆಳೆತನದ ಬಾನಂಗಳದಲಿ ಮಿಂಚಿ ಮರೆಯಾದ ಮೊದಲ ತಾರೆಗೆ.. I mean ಗೆಳತಿ …***ಗೆ.,

ನಿನ್ನನ್ನ ಹೇಗಿದ್ದೀಯಾ ಅಂಥ ಕೇಳಲಿಕ್ಕೆ ಮನಸೇ ಬರುತ್ತಿಲ್ಲ.. ನನ್ನನ್ನ ನೋವಿನ ಬಾವಿಗೆ ತಳ್ಳಿ ಹೋದ ನೀ ಚೆನ್ನಾಗಿರದೆ ಮತ್ತೇನು…

ಚೆನ್ನಾಗೇ ಇರು.. ಆದರೆ ನಾನ್ ಚೆನ್ನಾಗಿಲ್ಲ ನೋಡು ಅದಕ್ಕೆ ಈ ಪತ್ರ.

ಈ ಬಾಳಿನ ಸುಂದರ ಪ್ರಯಾಣದಲಿ ಗೆಳತಿಯಾಗಿ ಕೈ ಹಿಡಿದು ಜೊತೆ-ಜೊತೆಗೆ ಸಾಗುವೆ…, ಅದಕ್ಕೇಕೆ ಪ್ರೀತಿ ಗೊಡವೆ ಎಂದು ಹೇಳಿದ ನೀನೆ

ಈಗ ಈ ದಾರಿಯಲಿ ನನ್ನ ಒಬ್ಬಂಟಿಯಾಗಿ ಮಾಡಿ, ನಾ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ಕೈ ಬಿಟ್ಟು…, ಈ ಕೈಗಳ ತಬ್ಬಲಿ ಮಾಡಿ ಹೋದೆಯಲ್ಲಾ .. ಮನಸಾದ್ರು ಹೆಂಗ್ ಬಂತು…?

ನೀ ಹೋಗುವಾಗ ತಿರುಗಿ ನೋಡಿದ್ಯಾ ಇಲ್ವಾ..? ನೋಡಿದ್ರೆ ನೀ ಕರಗಿ ಹೋಗ್ತಿದ್ದೆ ಕಣೆ..!

ನೋಡಿಯೂ ಕರಗದೆ ಇದಿಯಾ ಅಂದ್ರೆ ನೀನು ಹೂ ಗಳಿಂದ Make up ಮಾಡ್ಕಂಡಿರೋ ಕಲ್ಲು ಹೃದಯದವಳು.. Am sorry ಹೀಗ್ ಹೇಳಿದ್ದಕ್ಕೆ.

ಪ್ರತಿ ದಿನ ಬೆಳಗ್ಗೆ Mobileಗೆ message ಮಾಡಿ ಶುಭಾಶಯ ಕಳುಸ್ತಿದ್ದಲ್ಲಾ…, ಇದೇನಾ ನಿನ್ನ ಆಶಯ..?

ನನ್ ಮೊಬೈಲ್ ಪ್ರತಿ ಸಲ ರಿಂಗಣಿಸಿದಾಗ ಅದು ನಿನ್ನದೆ ಕರೆ.. ಅಥವಾ ಕರೆಯೋಲೆ ಇರ್ಬೇಕು ಅಂದುಕೊಳ್ಳುತ್ತಿದ್ದವನಿಗೆ ಇದೇನಾ ನೀ ಕೊಟ್ಟಾ ಉಡುಗೊರೆ..? ಮತ್ತೆ ರಾತ್ರಿಗೆ Sweet Dreams ಅಂತ ಕಳಿಸ್ತಿದ್ದಲ್ಲಾ.. ಕೇಳೇ ಈಗ್ ಸಿಹಿ ಕನಸೇನ್ ಬಂತು ಮಣ್ಣು.. ನಿದ್ದೇನೆ ಇಲ್ಲ ಕಣೆ ಈ ಕಂಗಳಿಗೆ… ನೀ ಕಳಿಸಿದ್ದು ಬರಿ ಕೃತಕ ಭಾವ ತುಂಬಿದ ಅಕ್ಷರಗಳಾ…?

ಬರೀ ಪ್ರಶ್ನೆ ಗಳೇ ಅಲ್ವಾ..!

ಆದ್ರೆ ಉತ್ತರಾನೇ ಇಲ್ವಲ್ಲೆ… ಕೊಡಬೇಕಾದವಳು ನೀನೆ… ನೀನೆ ನನ್ ದೂರ ತಳ್ಳಿದೆಯಲ್ಲ…ಯಾಕೆ..?

ಕಿತ್ಕೊಂಡ್ ಬರೋ ದುಃಖಾನ ಎಷ್ಟೋ ಜನ ಕಣ್ಣೀರ್ ಹಾಕಿ ಹೊರಗೆ ದಬ್ಬ್ತಾರೆ.. ಅವರಿಗೆ ..,ಅವರ ಕಂಬನಿ ಒರೆಸೋಕ್ಕೆ ಅಂತ ಕೈಗಳಾದರೂ ಇರ್ತವೆ… ಆದ್ರೆ ಇಲ್ಲಿ…

ನಾ ಇಲ್ಲಿ ಕಣ್ಣೀರಿಡ್ತಾ ಇಲ್ಲ.. ಅದು ಬರೋದು ಇಲ್ಲ.. ಕಣ್ಣಲ್ಲಿ ಬರ ಬಿದ್ದು ತುಂಬಾ ದಿನಗಳಾಯ್ತು… ಆದ್ರೆ ಅಳ್ತಾ ಇರೋದು ನನ್ ಮನಸು ಕಣೇ… ಇದಕ್ಕೆ ಬೇಕಾಗಿರೋದು ನಿನ್ನವೆ ಸಾಂತ್ವಾನದ ನುಡಿಗಳು…!

ಕೊಡೋಕ್ ಆಗಲ್ವಾ… ಬೇಡ.. ಆದ್ರೆ ನನಗೆ ಕಾರಣ ಬೇಕು..

ಯಾಕೆ ನನ್ನಿಂದ ದೂರ ಹೋದೆ..? ಯಾಕೆ…..?????

ಅಷ್ಟೆ.. ಅದೊಂದ್ ಹೇಳ್ಬಿಡು… ಕೇಳಿದ ಮೇಲೆ ಮತ್ತ್ಯಾವತ್ತು ನಿನ್ನ ಜೀವನದಲಿ ಯಾವ ರೂಪದಲ್ಲಿಯೂ ಬರೋದಿಲ್ಲ…

ಹೇಳಿ ಹೋಗು ಕಾರಣ ಅಂಥ ಕೇಳೋಕೆ ಅವಕಾಶನೆ ಕೊಡದೆ ಹೋಗಿದ್ದಿಯಾ, ಆದ್ರೆ ಕೇಳೊ ಹಕ್ಕಿದೆ ಅನ್ಕೊಂಡ್ ಕೇಳ್ತಾ ಇದಿನಿ.. ದಮ್ಮಯ್ಯ ಉತ್ತರ ಕೊಡೆ..! ಇನ್ಮುಂದೆ ನಾ ಚೆನ್ನಾಗಿ ಬದುಕ್ತಿನಾ ಗೊತ್ತಿಲ್ಲ, ಆದ್ರೆ ದಯನೀಯವಾಗಿ ಬದುಕಬಾರು ಅಂದ್ರೆ ನೀ ಕಾರಣ ಹೇಳಲೇಬೇಕು..

ವಿನಾಕಾರಣ ನಾ ಕಟ್ಟಿದ ಗೆಳೆತನದ ಅಂತಃಪುರವನ್ನಾ ಒಡೆದು ಉರುಳಿಸಿ, ನನ್ನ ಮನದಂಗಳದ್ಲಿ ಇಟ್ಟ ಹೆಜ್ಜೆ ಗುರುತುಗಳನ್ನೂ ಅಳಿಸಿ ನೀ ಹೋದೆ ಅಂದ್ರೆ ನನ್ನಿಂದ ನಂಬಲಿಕ್ಕೆ ಆಗ್ತಿಲ್ಲ..

ಯಾಕೆ.. ಇಷ್ಟು ದಿನ ಸಹ್ಯವಾಗಿದ್ದವನು ಇದ್ದಕಿದ್ದ ಹಾಗೆ ಅಸಹ್ಯ ಆಗಿ ಬಿಟ್ಟೆನಾ..?

ನಿನ್ನ ಮನಸಿಗೆ ಎಂದೂ ಮರೆಯದ ಗಾಯ ಏನಾದ್ರೂ ಮಾಡಿದಿನಾ..?

ಅಥವಾ ನಿನ್ನನ್ನ ಗೆಳತಿಯಂದಷ್ಟೇ ಸ್ವೀಕರಿಸಿದ ನನ್ನ ಮೇಲೇ ಹೇಳಲಾಗದ ಪ್ರೀತಿ ಮೂಡಿ, ನನ್ನ ನಂಬಿಕೆಗೆ ಮೋಸ ಆಗದಿರಲೆಂದು ಹೋದೆಯಾ…??

ಹೇಳೇ ಏನ್ ಕಾರಣ ಅಂಥ ಪ್ರಾಮಾಣಿಕವಾಗಿ ಹೇಳು..

ತಪ್ಪು ನನ್ನಿಂದಾಗಿದ್ರೆ ಶಿಕ್ಷಿಸೋ ಅಧಿಕಾರ ನಿಂಗಿದೆ, ತಪ್ಪು ನಿನ್ನಿಂದಲೇ ಆಗಿದ್ರೆ ಮನ್ನಿಸೋ ಮನಸು ನಂಗಿದೆ… ಆದರೆ ಕಾರಣ ಹೇಳದೇನೆ ಶಿಕ್ಷಿಸಿ ನೋವು ನಿಡೋಕ್ಕೆ ನಿಂಗೆ ಹಕ್ಕು-ಅಧಿಕಾರ ಎರಡೂ ಇಲ್ಲ..

ಯಾರಗೂ ಕಾಣದಂಗೆ ಎಲ್ಲಾದ್ರೂ ದೂರ ಹೋಗಿ ಅಳ್ಬೇಕು.., ನಿನ್ ಮೇಲೆ ಸಾವಿರ ದೂರಗಳನ್ನ ಆ  ದೇವರಿಗೆ ಕೊಡ್ಬೇಕು..

ನಿನ್ನ ಸಾಯಿಸಿ.. ನಾನೂ ಸಾಯಬೇಕು ಅನ್ನಿಸ್ತಾ ಇದೆ.. But ನಾನ್ ಆ ಜಾತಿಗೆ ಸೇರಿದವನಲ್ಲ..!! ಅಸಹಾಯಕ ಕಣೆ ನಾನು…!

ಈ ಥರ ಪ್ರತಿ ಗಳಿಗೆ ಸಾಯ್ಸೋ ಬದಲು… ಒಂದೇ ಸಲ ಸಾಯಿಸಿಬಿಡಮ್ಮಾ… ಆರಾಮಾಗ್ ಬದಕ್ತಿನಿ ಸತ್ ಮೇಲೆ…!!!

ನನ್ನ ಈ ಕೂಗು ನಿನಗೆ ಮಟ್ಟೇ ಮಟ್ಟುತ್ತೆ.. ನೀ ಬಂದೇ ಬರ್ತಿಯಾ… ಕಾರಣ ಹೇಳೇ ಹೇಳ್ತಿಯಾ ಅಂಥ ಕಾಯ್ತಾನೇ ಇರ್ತಿನಿ ಕಣೆ..!

ಸಾಯೋವರೆಗು ಕಾಯೋ ಹಾಗೆ ಮಾತ್ರ ಮಾಡ್ ಬೇಡ…

Plz…

ಇಂತಿ ನಿನ್ನ ಕೆಲವು ದಿನಗಳಾ (ಪಾಪಿ) ಗೆಳೆಯ… !!

Advertisements

41 thoughts on “ಕ್ರೂರ ಗೆಳತಿಗೆ…

 1. mahesh ( bhuhima ) ಹೇಳುತ್ತಾರೆ:

  maga.. i love u da.. nanna vedanegalannu yaavaga arta madkonde anta…? yakandre naaninnu yochista idini, antadralli ninu lekhani inda geechi haakidiya.. good luck.. thanks…!!!

 2. E.T.U ಹೇಳುತ್ತಾರೆ:

  all ur feelings r shown in this letter. its hard to take, but it happens. good one.

 3. ಚಾಮರಾಜ ಸವಡಿ ಹೇಳುತ್ತಾರೆ:

  ಭಗ್ನಹೃದಯಿ ಮಿತ್ರನೇ,

  ತುಂಬ ನೊಂದುಕೊಂಡಿದ್ದೀರಾ. ಅದಕ್ಕೆಂದೇ ತುಂಬ ಮಾಗುತ್ತಿರುವ ಹಾಗಿದೆ. ನಿಮ್ಮ ಬರವಣಿಗೆ ತುಂಬ ಅದರದೇ ಗುರುತು.

  ಇಳಿತಾ ಹೋದ ಹಾಗೆಲ್ಲ ತಿಳಿತಾ ಹೋಗುತ್ತದಂತೆ. ಆದರೆ ಒಮ್ಮೊಮ್ಮೆ, ಇಷ್ಟೆಲ್ಲ ತಿಳ್ಕೊಂಡು ಮಾಡೋದಾದ್ರೂ ಏನು? ಎಂಬ ಪ್ರಶ್ನೆ ಬರುತ್ತದೆ. ಮನುಷ್ಯ ಮಾಗುವುದೇ ಹೀಗೆ. ಸಹಜವಾಗಿ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ.

  ಮನಸ್ಸಿನಲ್ಲಿ ಕಹಿ ಬೇಡ. ಅಷ್ಟೊಂದು ಕಹಿಯನ್ನು ಅದು ಸಹಿಸದು. ನಮ್ಮ ಬದುಕು ಇನ್ನೊಬ್ಬರ ನೆನಪಿನಲ್ಲೇ ನವೆಯಬೇಕಾ? ಅದು ಅಷ್ಟೊಂದು ನಿಕೃಷ್ಟವೇ?

  ವಿಚಾರಿಸಿ ನೋಡಿ.

  – ಚಾಮರಾಜ ಸವಡಿ

  http://chamarajsavadi.blogspot.com

 4. DJ ಹೇಳುತ್ತಾರೆ:

  ಹೇಳದೆ ಹೋದಲೆಂದೇ ಇಷ್ಟು ಕಂಗಾಲಾಗಿರುವ ನೀವು, ಹೇಳಿ ಹೋಗಿದ್ದರೆ ಸಹಿಸುತ್ತಿದ್ದಿರ ಆ ಗಳಿಗೆಯನ್ನು? ನಿಮ್ಮಿಂದ ಸಾದ್ಯವಾಗದುದನ್ನು ನಿಮ್ಮ ಮೇಲೇರುವ ತವಕ ಆ ನಿಮ್ಮ ಗೆಳತಿಗಿಲ್ಲ ಹಾಗೆ ಅಗಲಿಕೆಯ ನೋವನ್ನು ಹೆಚ್ಚಿಸಿಕೊಳ್ಳುವ ಆಸೆಯು ಅವಳಿಗಿಲ್ಲ. ಅಗಲಿಕೆಯ ಕ್ರೂರ ಗಳಿಗೆಯನ್ನು ದೂರ ಮಾಡಿದ ಅವಳು ಕ್ರೂರಿಯೇ? ಹಾಗಿದ್ದರೆ ನೀವಿಂದು ಅವಳನ್ನು ನೆನೆಸುತ್ತಿದ್ದಿರ? ಗೆಳತಿ, ಗೆಳತಿಯಾಗಿಯೇ ಇರುವ ಹಂಬಲಿದಿಂದ ಅಗಲಿದ್ದಾಳೆ, ಅವಳಿಗೆ ಶುಭ ಹಾರೈಸಿ, ಸಂಗಾತಿಯೋಬ್ಬಳನ್ನು ಆರಿಸಿಕೊಳ್ಳಿ, ನಿಮ್ಮ ಗೆಳತಿ ನಿಮ್ಮನ್ನು ಹಾರಿಸಲು ಓಡೋಡಿ ಬರುತ್ತಾಳೆ !

 5. Nagraj ಹೇಳುತ್ತಾರೆ:

  @ಚಾಮರಾಜ ಸವಡಿ

  ಹಾಂ.. ನೀವು ಹೇಳಿದ ಹಾಗೆ ವಿಚಾರಿಸಿದೆ.. ನನ್ನೆ ನಾ..!
  ನೀವು ಹೇಳಿದ್ದು ಸರಿ ಅನ್ನಿಸ್ತು..!
  ಅಲ್ವಾ…ನಮ್ಮ ಬದುಕು ಇನ್ನೊಬ್ಬರ ನೆನಪಿನಲ್ಲೇ ನವೆಯಬೇಕಾ? ಅದು ಅಷ್ಟೊಂದು ನಿಕೃಷ್ಟವೇ?… ಉತ್ತರ್ ಸಿಕ್ಕಿದೆ…!!

 6. Nagraj ಹೇಳುತ್ತಾರೆ:

  @Dj..!

  ಗೊತ್ತಿಲ್ಲ.. ಹೇಳಿ ಹೋಗಿದ್ರೆ.. ಇಷ್ಟು ಕಂಗಾಲಾಗಿರುತ್ತಿದ್ದೆನಾ..!!!

  ಆದರೆ ಹೀಗೆ ಜೊತೆಗೆ ನಡೆದು ಬಂದವರು… ಒಮ್ಮೊಮ್ಮೆ ಕೈ ಹಿಡಿದು ನಡೆಸಿದವರು ಹೇಳದೆ ಕೇಳದೆ ಹೋದರೆಂದರೆ.. ಅದೂ ಒಂದು ಸುಳಿವು ನೀಡದೆ..

  ಹೇಳಿ ಹೋಗಿದ್ದರೆ ಆ ಗಳಿಗೆಗಿಂತ ಹೇಳದೆ ಹೋದ ನಂತರದ ಗಳಿಗೆಗಳು ಕ್ರೂರವಾಗಿವೆ…!!

 7. Vivek ಹೇಳುತ್ತಾರೆ:

  hi..
  e patra oadidrae .. easto sala .. nanu baribekendukoandu .. bareyalagada patra anisthidae ….

  hates of to you …..

  Cheers,
  Vivek R

 8. Sampu ಹೇಳುತ್ತಾರೆ:

  Hi Eestu Dinadinda ninna Manasinalli Eeeee…….? Ediate Novu Tumbikondidde Geleya Eee Pritine Iga Illa Hudugiru Iga,

  Bere Yavudadru Patra Iddre Baritya Nangu Oodi Alabeku Annistaide Kano Naga Plllllzzzzzzzzzzzzzzzz.

  Innti

  Ninna Geleya

 9. uma ಹೇಳುತ್ತಾರೆ:

  ದಮ್ಮಯ್ಯ ಉತ್ತರ ಕೊಡೆ..! ನಿಮಗೆ ಆತ್ಮ ಗೌರವ ಅನ್ನೋದೇ ಇಲ್ವಾ?

  ನಮ್ಮನ್ನ ಕಾರಣ ಇಲ್ಲದೆ ಧಿಕ್ಕರಿಸಿ ಹೋದವರನ್ನ ನಾವು ಧಿಕ್ಕರಿಸಿ ಬದುಕೋದು ಕಲಿಯಬೇಕು.

 10. nagu ಹೇಳುತ್ತಾರೆ:

  ನಮ್ಮದೇ ಭಾವಗಳ ಮುಂದೆ, ನಮ್ಮ ಆತ್ಮ ಗೌರವ ಗೌಣ ಅನ್ನಿಸೋದಿಲ್ವೆ..

  ಕನಿಷ್ಟ ಒಂದೆರೆಡು ಗಳಿಗೆಯಾದರೂ…?

 11. viju...... ಹೇಳುತ್ತಾರೆ:

  Olavina gelaya,

  Don’t Worry “Take the Life as it Comes, Dont try to turn your life because it will deviate”

  Take care

  byeeeee

  viju…………..

 12. Naagu ಹೇಳುತ್ತಾರೆ:

  Thanks Viju..

  thanks 4 ur genuine suggestion!

 13. chiks ಹೇಳುತ್ತಾರೆ:

  hi man
  Janara bayalli Radha Madavaru eruvavarege prema kathe ge koneyilla. hage prema kate eiruva varege novu nalivige anthya villa alva……… . ?

 14. Naagu ಹೇಳುತ್ತಾರೆ:

  Thanks for ur Comment

  and Yes.. u r right.. Radha Madhavaranna NoDalaagadiddaru
  preetiyali nOvu nalivannu nODabahdu..!

 15. ganesh mk ಹೇಳುತ್ತಾರೆ:

  sir nev bardiro kate nejvglu nande kate annistide bt nam matternalli ebbardu tappide aste……

 16. Naagu ಹೇಳುತ್ತಾರೆ:

  hmm… inn en heLbeko tiLitilla…

  But keep moving..

  ene aagali nagabeku..

 17. ranjanahegde ಹೇಳುತ್ತಾರೆ:

  ತುಂಬಾ ಚೆನ್ನಾಗಿದೆ, ನಿಜವಾಗಿಯೂ ಭಗ್ಞಪ್ರೆಮಿಯೆನೋ ಅನ್ನಿಸೋ ಹಾಗಿದೆ….

 18. Naag ಹೇಳುತ್ತಾರೆ:

  Thanks Ranjana Hegde…!

 19. vinay b.raj ಹೇಳುತ್ತಾರೆ:

  ಗೆಳೆಯ ಬಧುಕಿನುದ್ದಕು ಅಂಗೈಯಲ್ಲಿ ಆದ ಗಾಯದಂತೆ ಕಾಡುವ,
  ನೆನಪಗಾಗಿ ಉಳಿಯುವ ಪ್ರೀತಿ ಚಿಗುರ ಬೇಕಾದ್ದಧಾದರು ಯಾಕೆ?
  ಇದು ಉತ್ತರ ವಿಲ್ಲದ ನನ್ನ ಪ್ರಶ್ನೆ

  i knw its very sad wen pepl we knw become we knew

  take it easy life has 2 go O N . . .

 20. roni ಹೇಳುತ್ತಾರೆ:

  Hi Mitra, Ninna Novina nijavada kathe odidada nange, Hegadaru santwana helabekenisaddake……Lekhani, I Got Solution From Secret of victory…The world is full of people who are looking for someone to love them.Some seek for love in freindships and some in Marraige, But all this search can end in disappoint. what is the answer of the gospel(BIBLE) to this problem?The answer is to find our security in the love of GOD.Jesus repeatedly told His Disciples that the hairs on their head were all numbered and that a God who fed the Millions of birds and clothed the millions of Flowers would certainly take care of them…..He who did not spare his own son but gave HIm up freely for us, How shall He not with him also freely give us ALL THINGS(ROMANS 8:32)

 21. roni ಹೇಳುತ್ತಾರೆ:

  One reason why God allows us at times to be disappointed with our fellow-human is so that we might learn to STOP LEANING on man.He desires to free from such a thing, so that we might learn to LEAN WHOLLY upon HIM(Jesus) allone .

 22. Bharathi Jayaram ಹೇಳುತ್ತಾರೆ:

  dear friend…… prithisi mareyo hrudayakintha…………. prithiya nenapale jivana kaleyodu ondurithi prema puje erabahudu……………. ega nana baduku ede thara nithya prema puje yale saguthide………………………. yochis beda friend she will come………………………………………………

 23. PUSHPA.ACHARYA ಹೇಳುತ್ತಾರೆ:

  Dear friend,

  Nimge, avru nimminda doora agirodakke n/ovagide artha aguthe,avrigu aste novagiralu bahudu,helikollallagada karanagalu irbahudu.

 24. preethi ಹೇಳುತ್ತಾರೆ:

  karana kelde summane yak idri this is not carrect avaranna karana kelbekithu kelo hakku nimage ide alva

 25. inthi ninna preethiya naanyaru ಹೇಳುತ್ತಾರೆ:

  gottilla gelaya. udukidru uttarane sigada prasnegalu .pls nondkobeda auloblu mhuki andkoooooooooooooooooooooooooooo
  mosamadorge preethi artha agalla???????????

 26. kushal,is alone boy ಹೇಳುತ್ತಾರೆ:

  ನನ್ನ ಮನದ ಗೆಳೆತನದ ಬಾನಂಗಳದಲಿ ಮಿಂಚಿ ಮರೆಯಾದ ಮೊದಲ ತಾರೆಗೆ.. I mean ಗೆಳತಿ …***ಗೆ.,

  ನಿನ್ನನ್ನ ಹೇಗಿದ್ದೀಯಾ ಅಂಥ ಕೇಳಲಿಕ್ಕೆ ಮನಸೇ ಬರುತ್ತಿಲ್ಲ.. ನನ್ನನ್ನ ನೋವಿನ ಬಾವಿಗೆ ತಳ್ಳಿ ಹೋದ ನೀ ಚೆನ್ನಾಗಿರದೆ ಮತ್ತೇನು…

  ಚೆನ್ನಾಗೇ ಇರು.. ಆದರೆ ನಾನ್ ಚೆನ್ನಾಗಿಲ್ಲ ನೋಡು ಅದಕ್ಕೆ ಈ ಪತ್ರ.

  ಈ ಬಾಳಿನ ಸುಂದರ ಪ್ರಯಾಣದಲಿ ಗೆಳತಿಯಾಗಿ ಕೈ ಹಿಡಿದು ಜೊತೆ-ಜೊತೆಗೆ ಸಾಗುವೆ…, ಅದಕ್ಕೇಕೆ ಪ್ರೀತಿ ಗೊಡವೆ ಎಂದು ಹೇಳಿದ ನೀನೆ

  ಈಗ ಈ ದಾರಿಯಲಿ ನನ್ನ ಒಬ್ಬಂಟಿಯಾಗಿ ಮಾಡಿ, ನಾ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ಕೈ ಬಿಟ್ಟು…, ಈ ಕೈಗಳ ತಬ್ಬಲಿ ಮಾಡಿ ಹೋದೆಯಲ್ಲಾ .. ಮನಸಾದ್ರು ಹೆಂಗ್ ಬಂತು…?

  ನೀ ಹೋಗುವಾಗ ತಿರುಗಿ ನೋಡಿದ್ಯಾ ಇಲ್ವಾ..? ನೋಡಿದ್ರೆ ನೀ ಕರಗಿ ಹೋಗ್ತಿದ್ದೆ ಕಣೆ..!

  ನೋಡಿಯೂ ಕರಗದೆ ಇದಿಯಾ ಅಂದ್ರೆ ನೀನು ಹೂ ಗಳಿಂದ Make up ಮಾಡ್ಕಂಡಿರೋ ಕಲ್ಲು ಹೃದಯದವಳು.. Am sorry ಹೀಗ್ ಹೇಳಿದ್ದಕ್ಕೆ.

  ಪ್ರತಿ ದಿನ ಬೆಳಗ್ಗೆ Mobileಗೆ message ಮಾಡಿ ಶುಭಾಶಯ ಕಳುಸ್ತಿದ್ದಲ್ಲಾ…, ಇದೇನಾ ನಿನ್ನ ಆಶಯ..?

  ನನ್ ಮೊಬೈಲ್ ಪ್ರತಿ ಸಲ ರಿಂಗಣಿಸಿದಾಗ ಅದು ನಿನ್ನದೆ ಕರೆ.. ಅಥವಾ ಕರೆಯೋಲೆ ಇರ್ಬೇಕು ಅಂದುಕೊಳ್ಳುತ್ತಿದ್ದವನಿಗೆ ಇದೇನಾ ನೀ ಕೊಟ್ಟಾ ಉಡುಗೊರೆ..? ಮತ್ತೆ ರಾತ್ರಿಗೆ Sweet Dreams ಅಂತ ಕಳಿಸ್ತಿದ್ದಲ್ಲಾ.. ಕೇಳೇ ಈಗ್ ಸಿಹಿ ಕನಸೇನ್ ಬಂತು ಮಣ್ಣು.. ನಿದ್ದೇನೆ ಇಲ್ಲ ಕಣೆ ಈ ಕಂಗಳಿಗೆ… ನೀ ಕಳಿಸಿದ್ದು ಬರಿ ಕೃತಕ ಭಾವ ತುಂಬಿದ ಅಕ್ಷರಗಳಾ…?

  ಬರೀ ಪ್ರಶ್ನೆ ಗಳೇ ಅಲ್ವಾ..!

  ಆದ್ರೆ ಉತ್ತರಾನೇ ಇಲ್ವಲ್ಲೆ… ಕೊಡಬೇಕಾದವಳು ನೀನೆ… ನೀನೆ ನನ್ ದೂರ ತಳ್ಳಿದೆಯಲ್ಲ…ಯಾಕೆ..?

  ಕಿತ್ಕೊಂಡ್ ಬರೋ ದುಃಖಾನ ಎಷ್ಟೋ ಜನ ಕಣ್ಣೀರ್ ಹಾಕಿ ಹೊರಗೆ ದಬ್ಬ್ತಾರೆ.. ಅವರಿಗೆ ..,ಅವರ ಕಂಬನಿ ಒರೆಸೋಕ್ಕೆ ಅಂತ ಕೈಗಳಾದರೂ ಇರ್ತವೆ… ಆದ್ರೆ ಇಲ್ಲಿ…

  ನಾ ಇಲ್ಲಿ ಕಣ್ಣೀರಿಡ್ತಾ ಇಲ್ಲ.. ಅದು ಬರೋದು ಇಲ್ಲ.. ಕಣ್ಣಲ್ಲಿ ಬರ ಬಿದ್ದು ತುಂಬಾ ದಿನಗಳಾಯ್ತು… ಆದ್ರೆ ಅಳ್ತಾ ಇರೋದು ನನ್ ಮನಸು ಕಣೇ… ಇದಕ್ಕೆ ಬೇಕಾಗಿರೋದು ನಿನ್ನವೆ ಸಾಂತ್ವಾನದ ನುಡಿಗಳು…!

  ಕೊಡೋಕ್ ಆಗಲ್ವಾ… ಬೇಡ.. ಆದ್ರೆ ನನಗೆ ಕಾರಣ ಬೇಕು..

  ಯಾಕೆ ನನ್ನಿಂದ ದೂರ ಹೋದೆ..? ಯಾಕೆ…..?????

  ಅಷ್ಟೆ.. ಅದೊಂದ್ ಹೇಳ್ಬಿಡು… ಕೇಳಿದ ಮೇಲೆ ಮತ್ತ್ಯಾವತ್ತು ನಿನ್ನ ಜೀವನದಲಿ ಯಾವ ರೂಪದಲ್ಲಿಯೂ ಬರೋದಿಲ್ಲ…

  ಹೇಳಿ ಹೋಗು ಕಾರಣ ಅಂಥ ಕೇಳೋಕೆ ಅವಕಾಶನೆ ಕೊಡದೆ ಹೋಗಿದ್ದಿಯಾ, ಆದ್ರೆ ಕೇಳೊ ಹಕ್ಕಿದೆ ಅನ್ಕೊಂಡ್ ಕೇಳ್ತಾ ಇದಿನಿ.. ದಮ್ಮಯ್ಯ ಉತ್ತರ ಕೊಡೆ..! ಇನ್ಮುಂದೆ ನಾ ಚೆನ್ನಾಗಿ ಬದುಕ್ತಿನಾ ಗೊತ್ತಿಲ್ಲ, ಆದ್ರೆ ದಯನೀಯವಾಗಿ ಬದುಕಬಾರು ಅಂದ್ರೆ ನೀ ಕಾರಣ ಹೇಳಲೇಬೇಕು..

  ವಿನಾಕಾರಣ ನಾ ಕಟ್ಟಿದ ಗೆಳೆತನದ ಅಂತಃಪುರವನ್ನಾ ಒಡೆದು ಉರುಳಿಸಿ, ನನ್ನ ಮನದಂಗಳದ್ಲಿ ಇಟ್ಟ ಹೆಜ್ಜೆ ಗುರುತುಗಳನ್ನೂ ಅಳಿಸಿ ನೀ ಹೋದೆ ಅಂದ್ರೆ ನನ್ನಿಂದ ನಂಬಲಿಕ್ಕೆ ಆಗ್ತಿಲ್ಲ..

  ಯಾಕೆ.. ಇಷ್ಟು ದಿನ ಸಹ್ಯವಾಗಿದ್ದವನು ಇದ್ದಕಿದ್ದ ಹಾಗೆ ಅಸಹ್ಯ ಆಗಿ ಬಿಟ್ಟೆನಾ..?

  ನಿನ್ನ ಮನಸಿಗೆ ಎಂದೂ ಮರೆಯದ ಗಾಯ ಏನಾದ್ರೂ ಮಾಡಿದಿನಾ..?

  ಅಥವಾ ನಿನ್ನನ್ನ ಗೆಳತಿಯಂದಷ್ಟೇ ಸ್ವೀಕರಿಸಿದ ನನ್ನ ಮೇಲೇ ಹೇಳಲಾಗದ ಪ್ರೀತಿ ಮೂಡಿ, ನನ್ನ ನಂಬಿಕೆಗೆ ಮೋಸ ಆಗದಿರಲೆಂದು ಹೋದೆಯಾ…??

  ಹೇಳೇ ಏನ್ ಕಾರಣ ಅಂಥ ಪ್ರಾಮಾಣಿಕವಾಗಿ ಹೇಳು..

  ತಪ್ಪು ನನ್ನಿಂದಾಗಿದ್ರೆ ಶಿಕ್ಷಿಸೋ ಅಧಿಕಾರ ನಿಂಗಿದೆ, ತಪ್ಪು ನಿನ್ನಿಂದಲೇ ಆಗಿದ್ರೆ ಮನ್ನಿಸೋ ಮನಸು ನಂಗಿದೆ… ಆದರೆ ಕಾರಣ ಹೇಳದೇನೆ ಶಿಕ್ಷಿಸಿ ನೋವು ನಿಡೋಕ್ಕೆ ನಿಂಗೆ ಹಕ್ಕು-ಅಧಿಕಾರ ಎರಡೂ ಇಲ್ಲ..

  ಯಾರಗೂ ಕಾಣದಂಗೆ ಎಲ್ಲಾದ್ರೂ ದೂರ ಹೋಗಿ ಅಳ್ಬೇಕು.., ನಿನ್ ಮೇಲೆ ಸಾವಿರ ದೂರಗಳನ್ನ ಆ ದೇವರಿಗೆ ಕೊಡ್ಬೇಕು..

  ನಿನ್ನ ಸಾಯಿಸಿ.. ನಾನೂ ಸಾಯಬೇಕು ಅನ್ನಿಸ್ತಾ ಇದೆ.. But ನಾನ್ ಆ ಜಾತಿಗೆ ಸೇರಿದವನಲ್ಲ..!! ಅಸಹಾಯಕ ಕಣೆ ನಾನು…!

  ಈ ಥರ ಪ್ರತಿ ಗಳಿಗೆ ಸಾಯ್ಸೋ ಬದಲು… ಒಂದೇ ಸಲ ಸಾಯಿಸಿಬಿಡಮ್ಮಾ… ಆರಾಮಾಗ್ ಬದಕ್ತಿನಿ ಸತ್ ಮೇಲೆ…!!!

  ನನ್ನ ಈ ಕೂಗು ನಿನಗೆ ಮಟ್ಟೇ ಮಟ್ಟುತ್ತೆ.. ನೀ ಬಂದೇ ಬರ್ತಿಯಾ… ಕಾರಣ ಹೇಳೇ ಹೇಳ್ತಿಯಾ ಅಂಥ ಕಾಯ್ತಾನೇ ಇರ್ತಿನಿ ಕಣೆ..!

  ಸಾಯೋವರೆಗು ಕಾಯೋ ಹಾಗೆ ಮಾತ್ರ ಮಾಡ್ ಬೇಡ…

  Plz…

  ಇಂತಿ ನಿನ್ನ ಕೆಲವು ದಿನಗಳಾ (ಪಾಪಿ) ಗೆಳೆಯ… !!

 27. chinnu ಹೇಳುತ್ತಾರೆ:

  yan niv nimma na papi helthira ha .

 28. K M ಹೇಳುತ್ತಾರೆ:

  love andre age kanri

  K M

 29. Amitha Shetty ಹೇಳುತ್ತಾರೆ:

  kandita e novu naanu iga anbhavisita idini…. esto sahaya na maade preetisde adre yaro maadid tapge tilkond nan na dura madidare dura maadidru anta bejar agta ila adre adke sariyaad kaarna helde dura maadidrala adu sahiskollok aaagata ila…………..

 30. Navi avalu bittu hooda mele kavi. ಹೇಳುತ್ತಾರೆ:

  hi geleya nina baridirova prati akshara nana manasina bhavane kano ,nana hrudaya devate nangu hige madidale ,nanu kooda wait madata iddine kano ,aadare nina hrudaya raani ninge matte sigatare but avaru nijavada preeti naadidare ,am navi .

 31. kanakashiva ಹೇಳುತ್ತಾರೆ:

  hudugire haage ansutte frnd avru gunakkintha hanakke hecchina maanyathe kodthare, nam hatra irovaregu chinna ranna anta karedu nam hatra irodanella khali maadsi konege kaige chombu kottu, nangintha olle hudugi sikthale anta helthare enu maadokagalkla hudgire heege,

 32. MANU ಹೇಳುತ್ತಾರೆ:

  THUMBA THUMBA CHENNAGIDE SIR NIMMA FEELINGS E PATHRANA NIMMA HUDUGI NODIDARE SAKU ELLE IRALI ODI ODI BARTHALE SIR

 33. Vani ಹೇಳುತ್ತಾರೆ:

  Don’t worry, pratiyobbara jeevanadallu idu age agutte. adre avru matte sigtare andare avarigagi prana mattu samaya eradu meesalagidodralli artha ide. Adre yavattu mukhane nododilla anta helade hodavaranna nenuskondu neevyake kanneeru haktira. Modlu nimma mele nimma gelatige innu preeti idya anta confirm madkoli. Ond vele idre nimma samasyena matadikondu bagehariskolli. Preeti illa andre neevyake nimma amulyavada jeevana halu madkotira. Avarannu mareyoke prayatna padi. Naturena tumba preeti madi. aga nimge male, prani, pakshi ella ista agutte. nimma novu kadime agutte. kandita nimge munde olle dinagalu bande baruttave. nimma kelasadalli onde ondu second saha biduvillade involve agi. nanu madta irodu adanne. i am happy now.

 34. Ramesh ಹೇಳುತ್ತಾರೆ:

  e kaladha hudugerana yavthara nabovdu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s