What If..

Advertisements

ಕ್ರೂರ ಗೆಳತಿಗೆ…

 

ನನ್ನ ಮನದ ಗೆಳೆತನದ ಬಾನಂಗಳದಲಿ ಮಿಂಚಿ ಮರೆಯಾದ ಮೊದಲ ತಾರೆಗೆ.. I mean ಗೆಳತಿ …***ಗೆ.,

ನಿನ್ನನ್ನ ಹೇಗಿದ್ದೀಯಾ ಅಂಥ ಕೇಳಲಿಕ್ಕೆ ಮನಸೇ ಬರುತ್ತಿಲ್ಲ.. ನನ್ನನ್ನ ನೋವಿನ ಬಾವಿಗೆ ತಳ್ಳಿ ಹೋದ ನೀ ಚೆನ್ನಾಗಿರದೆ ಮತ್ತೇನು…

ಚೆನ್ನಾಗೇ ಇರು.. ಆದರೆ ನಾನ್ ಚೆನ್ನಾಗಿಲ್ಲ ನೋಡು ಅದಕ್ಕೆ ಈ ಪತ್ರ.

ಈ ಬಾಳಿನ ಸುಂದರ ಪ್ರಯಾಣದಲಿ ಗೆಳತಿಯಾಗಿ ಕೈ ಹಿಡಿದು ಜೊತೆ-ಜೊತೆಗೆ ಸಾಗುವೆ…, ಅದಕ್ಕೇಕೆ ಪ್ರೀತಿ ಗೊಡವೆ ಎಂದು ಹೇಳಿದ ನೀನೆ

ಈಗ ಈ ದಾರಿಯಲಿ ನನ್ನ ಒಬ್ಬಂಟಿಯಾಗಿ ಮಾಡಿ, ನಾ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ಕೈ ಬಿಟ್ಟು…, ಈ ಕೈಗಳ ತಬ್ಬಲಿ ಮಾಡಿ ಹೋದೆಯಲ್ಲಾ .. ಮನಸಾದ್ರು ಹೆಂಗ್ ಬಂತು…?

ನೀ ಹೋಗುವಾಗ ತಿರುಗಿ ನೋಡಿದ್ಯಾ ಇಲ್ವಾ..? ನೋಡಿದ್ರೆ ನೀ ಕರಗಿ ಹೋಗ್ತಿದ್ದೆ ಕಣೆ..!

ನೋಡಿಯೂ ಕರಗದೆ ಇದಿಯಾ ಅಂದ್ರೆ ನೀನು ಹೂ ಗಳಿಂದ Make up ಮಾಡ್ಕಂಡಿರೋ ಕಲ್ಲು ಹೃದಯದವಳು.. Am sorry ಹೀಗ್ ಹೇಳಿದ್ದಕ್ಕೆ.

ಪ್ರತಿ ದಿನ ಬೆಳಗ್ಗೆ Mobileಗೆ message ಮಾಡಿ ಶುಭಾಶಯ ಕಳುಸ್ತಿದ್ದಲ್ಲಾ…, ಇದೇನಾ ನಿನ್ನ ಆಶಯ..?

ನನ್ ಮೊಬೈಲ್ ಪ್ರತಿ ಸಲ ರಿಂಗಣಿಸಿದಾಗ ಅದು ನಿನ್ನದೆ ಕರೆ.. ಅಥವಾ ಕರೆಯೋಲೆ ಇರ್ಬೇಕು ಅಂದುಕೊಳ್ಳುತ್ತಿದ್ದವನಿಗೆ ಇದೇನಾ ನೀ ಕೊಟ್ಟಾ ಉಡುಗೊರೆ..? ಮತ್ತೆ ರಾತ್ರಿಗೆ Sweet Dreams ಅಂತ ಕಳಿಸ್ತಿದ್ದಲ್ಲಾ.. ಕೇಳೇ ಈಗ್ ಸಿಹಿ ಕನಸೇನ್ ಬಂತು ಮಣ್ಣು.. ನಿದ್ದೇನೆ ಇಲ್ಲ ಕಣೆ ಈ ಕಂಗಳಿಗೆ… ನೀ ಕಳಿಸಿದ್ದು ಬರಿ ಕೃತಕ ಭಾವ ತುಂಬಿದ ಅಕ್ಷರಗಳಾ…?

ಬರೀ ಪ್ರಶ್ನೆ ಗಳೇ ಅಲ್ವಾ..!

ಆದ್ರೆ ಉತ್ತರಾನೇ ಇಲ್ವಲ್ಲೆ… ಕೊಡಬೇಕಾದವಳು ನೀನೆ… ನೀನೆ ನನ್ ದೂರ ತಳ್ಳಿದೆಯಲ್ಲ…ಯಾಕೆ..?

ಕಿತ್ಕೊಂಡ್ ಬರೋ ದುಃಖಾನ ಎಷ್ಟೋ ಜನ ಕಣ್ಣೀರ್ ಹಾಕಿ ಹೊರಗೆ ದಬ್ಬ್ತಾರೆ.. ಅವರಿಗೆ ..,ಅವರ ಕಂಬನಿ ಒರೆಸೋಕ್ಕೆ ಅಂತ ಕೈಗಳಾದರೂ ಇರ್ತವೆ… ಆದ್ರೆ ಇಲ್ಲಿ…

ನಾ ಇಲ್ಲಿ ಕಣ್ಣೀರಿಡ್ತಾ ಇಲ್ಲ.. ಅದು ಬರೋದು ಇಲ್ಲ.. ಕಣ್ಣಲ್ಲಿ ಬರ ಬಿದ್ದು ತುಂಬಾ ದಿನಗಳಾಯ್ತು… ಆದ್ರೆ ಅಳ್ತಾ ಇರೋದು ನನ್ ಮನಸು ಕಣೇ… ಇದಕ್ಕೆ ಬೇಕಾಗಿರೋದು ನಿನ್ನವೆ ಸಾಂತ್ವಾನದ ನುಡಿಗಳು…!

ಕೊಡೋಕ್ ಆಗಲ್ವಾ… ಬೇಡ.. ಆದ್ರೆ ನನಗೆ ಕಾರಣ ಬೇಕು..

ಯಾಕೆ ನನ್ನಿಂದ ದೂರ ಹೋದೆ..? ಯಾಕೆ…..?????

ಅಷ್ಟೆ.. ಅದೊಂದ್ ಹೇಳ್ಬಿಡು… ಕೇಳಿದ ಮೇಲೆ ಮತ್ತ್ಯಾವತ್ತು ನಿನ್ನ ಜೀವನದಲಿ ಯಾವ ರೂಪದಲ್ಲಿಯೂ ಬರೋದಿಲ್ಲ…

ಹೇಳಿ ಹೋಗು ಕಾರಣ ಅಂಥ ಕೇಳೋಕೆ ಅವಕಾಶನೆ ಕೊಡದೆ ಹೋಗಿದ್ದಿಯಾ, ಆದ್ರೆ ಕೇಳೊ ಹಕ್ಕಿದೆ ಅನ್ಕೊಂಡ್ ಕೇಳ್ತಾ ಇದಿನಿ.. ದಮ್ಮಯ್ಯ ಉತ್ತರ ಕೊಡೆ..! ಇನ್ಮುಂದೆ ನಾ ಚೆನ್ನಾಗಿ ಬದುಕ್ತಿನಾ ಗೊತ್ತಿಲ್ಲ, ಆದ್ರೆ ದಯನೀಯವಾಗಿ ಬದುಕಬಾರು ಅಂದ್ರೆ ನೀ ಕಾರಣ ಹೇಳಲೇಬೇಕು..

ವಿನಾಕಾರಣ ನಾ ಕಟ್ಟಿದ ಗೆಳೆತನದ ಅಂತಃಪುರವನ್ನಾ ಒಡೆದು ಉರುಳಿಸಿ, ನನ್ನ ಮನದಂಗಳದ್ಲಿ ಇಟ್ಟ ಹೆಜ್ಜೆ ಗುರುತುಗಳನ್ನೂ ಅಳಿಸಿ ನೀ ಹೋದೆ ಅಂದ್ರೆ ನನ್ನಿಂದ ನಂಬಲಿಕ್ಕೆ ಆಗ್ತಿಲ್ಲ..

 

ಯಾಕೆ.. ಇಷ್ಟು ದಿನ ಸಹ್ಯವಾಗಿದ್ದವನು ಇದ್ದಕಿದ್ದ ಹಾಗೆ ಅಸಹ್ಯ ಆಗಿ ಬಿಟ್ಟೆನಾ..?

ನಿನ್ನ ಮನಸಿಗೆ ಎಂದೂ ಮರೆಯದ ಗಾಯ ಏನಾದ್ರೂ ಮಾಡಿದಿನಾ..?

ಅಥವಾ ನಿನ್ನನ್ನ ಗೆಳತಿಯಂದಷ್ಟೇ ಸ್ವೀಕರಿಸಿದ ನನ್ನ ಮೇಲೇ ಹೇಳಲಾಗದ ಪ್ರೀತಿ ಮೂಡಿ, ನನ್ನ ನಂಬಿಕೆಗೆ ಮೋಸ ಆಗದಿರಲೆಂದು ಹೋದೆಯಾ…??

 

ಹೇಳೇ ಏನ್ ಕಾರಣ ಅಂಥ ಪ್ರಾಮಾಣಿಕವಾಗಿ ಹೇಳು..

ತಪ್ಪು ನನ್ನಿಂದಾಗಿದ್ರೆ ಶಿಕ್ಷಿಸೋ ಅಧಿಕಾರ ನಿಂಗಿದೆ, ತಪ್ಪು ನಿನ್ನಿಂದಲೇ ಆಗಿದ್ರೆ ಮನ್ನಿಸೋ ಮನಸು ನಂಗಿದೆ… ಆದರೆ ಕಾರಣ ಹೇಳದೇನೆ ಶಿಕ್ಷಿಸಿ ನೋವು ನಿಡೋಕ್ಕೆ ನಿಂಗೆ ಹಕ್ಕು-ಅಧಿಕಾರ ಎರಡೂ ಇಲ್ಲ..

 

ಯಾರಗೂ ಕಾಣದಂಗೆ ಎಲ್ಲಾದ್ರೂ ದೂರ ಹೋಗಿ ಅಳ್ಬೇಕು.., ನಿನ್ ಮೇಲೆ ಸಾವಿರ ದೂರಗಳನ್ನ ಆ  ದೇವರಿಗೆ ಕೊಡ್ಬೇಕು..

ನಿನ್ನ ಸಾಯಿಸಿ.. ನಾನೂ ಸಾಯಬೇಕು ಅನ್ನಿಸ್ತಾ ಇದೆ.. But ನಾನ್ ಆ ಜಾತಿಗೆ ಸೇರಿದವನಲ್ಲ..!! ಅಸಹಾಯಕ ಕಣೆ ನಾನು…!

ಈ ಥರ ಪ್ರತಿ ಗಳಿಗೆ ಸಾಯ್ಸೋ ಬದಲು… ಒಂದೇ ಸಲ ಸಾಯಿಸಿಬಿಡಮ್ಮಾ… ಆರಾಮಾಗ್ ಬದಕ್ತಿನಿ ಸತ್ ಮೇಲೆ…!!!

 

 

ನನ್ನ ಈ ಕೂಗು ನಿನಗೆ ಮಟ್ಟೇ ಮಟ್ಟುತ್ತೆ.. ನೀ ಬಂದೇ ಬರ್ತಿಯಾ… ಕಾರಣ ಹೇಳೇ ಹೇಳ್ತಿಯಾ ಅಂಥ ಕಾಯ್ತಾನೇ ಇರ್ತಿನಿ ಕಣೆ..!

ಸಾಯೋವರೆಗು ಕಾಯೋ ಹಾಗೆ ಮಾತ್ರ ಮಾಡ್ ಬೇಡ…

Plz…

 

ಇಂತಿ ನಿನ್ನ ಕೆಲವು ದಿನಗಳಾ (ಪಾಪಿ) ಗೆಳೆಯ… !!

Technical Love letter…!

Comptr Luv..!ಇದೊಂದು ಪಕ್ಕಾ Technical Love Letterru…!
ಒಬ್ಬ Computer Engineer ಬರೆದದ್ದು(ಕೊರೆದದ್ದು…!)
———————————————————————————————————-
ಹಾಯ್ …!

Monitor ಮಾದೇವಿಯೇ…! CPU ಶ್ರೀದೇವಿಯೇ…! ಹೇಗಿರುವೆ…? ಎಲ್ಲಿರುವೆ..?

ನನ್ನ ಹೃದಯದ HardDisk ನಲ್ಲಿ, ನಿನ್ನ ಕನಸುಗಳೆಂಬ Files ಗಳ save ಮಾಡಿ, ನೆನಪುಗಳೆಂಬ (ಸಿಹಿ) Virus ತುಂಬಿ, ಹೇಳದೇ ಕೇಳದೆ ಎಲ್ಲಿಗೆ ಹೋದೆ..!??

ಕ್ಷಮೆ ಇರಲಿ ಈ ಮಾತ್ ಹೇಳ್ತಾ ಇರೋದಕ್ಕೆ…,
ನನ್ನ ಈ ಹೃದಯವೆಂಬ HardDisk ಕೇವಲ ನಿನಗಾಗಿ ಮೀಸಲಲ್ಲ ಕಣೇ…! ಅದು ನನ್ನ ತಂದೆ ತಾಯಿ, ಅಕ್ಕ ತಂಗಿ, ಅಣ್ಣ ತಮ್ಮ, ಬಂದು ಮಿತ್ರರೆಲ್ಲರಿಗೂ ಸೇರಿದೆ..!
ಅದರಲ್ಲಿ ಮೂರಾರು Partition ಮಾಡಿ, ಹಂಚಿ, ಒಬ್ಬೊಬ್ಬರಿಗೂ ಮೀಸಲಿಟ್ಟಿದ್ದೇನೆ..! ಅದು ಸರಿಯಾ ನಂಗೊತ್ತಿಲ್ಲ…! ಆದ್ರೆ ತಪ್ಪಾಗಿರಲಾರದು…!

Ofcorse..,ನನ್ನ ತಾಯಿ-ತಂದೆ ನಂತರದ ಸ್ಥಾನ ನಿನಗೇನೆ…! ನಿನಗೆ ವಸಿ ಜಾಸ್ತಿಯೇ Space ಮೀಸಲಾಗಿದೆ..!
ಅದು ಎಷ್ಟು GB ಯೋ ನಾ ಹೆಳಲಾರೆ..! ಆದ್ರೆ
ಆದ್ರೆ, ತಿಳ್ಕೋ ನಿನಗಾಗಿ ಮೀಸಲಿಟ್ಟಿದ್ದ ಜಾಗ ಪೂರ ಇಂದು.. ಬರಿ ನಿನ್ನ ನೆನಪುಗಳೆಂಬ Virusಗಳಿಂದ Attack ಆಗಿದೆ..!
ಯಾವ AntiVirus(ಬೇರೆ ಹುಡುಗಿಯರು…!) ಕೂಡ install ಆಗ್ತಿಲ್ಲ, ಅದ್ರೂ ಆ Virusಗಳನ್ನ Remove ಮಾಡಿ Delete ಮಾಡಲಿಕ್ಕೆ ಆಗ್ತಿಲ್ಲ..!
ಇದಕ್ಕೆ Admisnistrator(ಆಡಳಿತಗಾರ್ತಿ…!) ಅಂದ್ರೆ ನಿನ್ನ ಜರೂರತ್ ಇದೆ..!
ಅವೆಲ್ಲವನ್ನ ನಿನ್ನ ‘ನಗು, ಪ್ರೀತಿ .. ‘ ಎಂಬ Software install ಮಾಡಿ ಸರಿಪಡಿಸಬೇಕು…!
ನೀನು ನನ್ನ ಪಾಲಿಗೆ ಕೇವಲ “ನೆನಪು” ಆಗ್ಬೇಡ.. ಬಾಳಿನ ಉದ್ದಗಲಕ್ಕೂ ಬದುಕೋ “ಕ್ಷಣ”ಗಳಾಗಬೇಕು…!

ಮೆದುಳೆಂಬ Processor On ಆಗಿ, Run ಆಗ್ತಿರೋ ತನಕ, ಮಿನುಮಿರುಗೋ Mionitor ಆಗ್ಬೇಕು.. ನನ್ನ ಬಾಳೆಂಬ Taskಗೆ ಬೆಳಕಾಗಬೇಕು..!
ಅದು ಹೇಗೆ, ಎಲ್ಲಿ, ಯಾವಾಗ ನಂಗೊತ್ತಿಲ್ಲ..!

ಈ ಪ್ರೀತಿ ಎಂಬ ಅಂತರ್ಜಾಲ.. Sorry ಮಾಯಾಜಾಲದಲ್ಲಿ, ನಾನಂತು ಸಿಕ್ಕಿ ಒದ್ದಾಡುತಿದ್ದೇನೆ..!
ಇಲ್ಲೇ ಬಿದ್ದಿರ್ಲಿ Bloody Heart Hacker ಅಂಥ ಸುಮ್ಮನಾಗ್ತಿಯೋ.., ಅಥವಾ ನನ್ನ Love software ನ ನಿನ್ನ ಎದೆಗೂಡಿನ Heart ಎಂಬ Hardiskನಲ್ಲಿ install ಮಾಡ್ಕೋತಿಯೋ ನಿಂಗ್ ಬಿಟ್ಟಿದ್ದು…!

ಮಾತಾಡೋಕ್ಕೆ ಮನಸಾದ್ರೆ Mailನಲ್ಲಿ ಮುನ್ಸೂಚನೆ ಕಳಿಸು..!, ಆದ್ರೆ ಅದರಲ್ಲಿ ಬರಿ “ಮೌನದ” Attachment ಬೇಡ..!
ಕನಸಾಗಿ ಕಾಡಬೇಕೆನಿಸಿದರೆ ಒಂದೊಳ್ಳೆ Greeting ಕಾರ್ಡು ಕಳಿಸು.., ಅದ್ರಲ್ಲಿ ನಿನ್ನ ” image ” ಹಾಕದೆ ಇರಬೇಡ..!

ಒಟ್ಟಿನಲ್ಲಿ ಈ ಜೀವ Shut Down ಆಗೋ ಮುನ್ನ, ಪ್ರೀತಿಯ Software ನ, ನಿನಗೋಸ್ಕರ್ ಅಂತಲೇ ಮೀಸಲಿಟ್ಟಿರೋ Spaceನಲ್ಲಿ install ಮಾಡು..!
ಇಲ್ಲವಾ, Restart ಮಾಡು.. ಇನ್ನೊಂದ್ ಜನ್ಮ ಇದೆ ಅನ್ನೋದಾದ್ರೆ Wait ಮಾಡು…!

Love me Or Hate me…!
Kiss me Or Kill me..!

Oh Darling, Plz Do Something to me…!

ಹಾಗೆ ಸುಮ್ಮನೆ ಮಾತ್ರ ಇರಬೇಡ….!

ಇಂತಿ,
ನಿನಗೆ ಪ್ರೀತಿಯ Invitation ಕಳ್ಸಿ Approval ಗೆ ಕಾಯ್ತಾ ಇರೋ…,

ನಾಲಾಯಕ್ ನಾಗ…!!